ಕರ್ನಾಟಕ ಬೈಬಲ್ ಕಾಲೇಜಿನಲ್ಲಿ ವಿಧ್ಯಾರ್ಥಿಗಳಿಗೆ ಉಜಿತ ಸತ್ಯವೇದ ತರಬೇತಿ ಜೂನ್ 14 ರಿಂದ

0
668

ಬೆಂಗಳೂರು: ಐ ಪಿ ಸಿ ಕರ್ನಾಟಕ ರಾಜ್ಯದ ಉಸ್ತುವಾರಿಯಲ್ಲಿ ಬೆಂಗಳೂರು ಹೊರಮಾವು ಅಗರ ಪ್ರದಾನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಬೈಬಲ್ ಕಾಲೇಜಿನಲ್ಲಿ ಸತ್ಯವೇದ ಅಧ್ಯಾಯನವು ಜೂನ್ 14 ರಿಂದ ಆರಂಭವಾಗಲಿದೆ.

B.Th, Dip.Th, C.Th ಎಂಬ ಕೋರ್ಸ್ ಗಳಲ್ಲಿ ಸೇರಲು ಸೇವೆಗಾಗಿ ದೇವರ ಕರೆಯುವಿಕೆ ಹಾಗೂ ಸಮರ್ಪಣೆಯಿರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಸಂಪೂರ್ಣ ಉಜಿತವಾಗಿ ವಿಧ್ಯಾರ್ಥಿಗಳಿಗೆ ಸತ್ಯವೇದ ಅಧ್ಯಾಯನ ನಡೆಸಲಾಗುತ್ತದೆ ಎಂದು ನಿರ್ವಾಹಕರಾದ ಪಾಸ್ಟರ್. ಕೆ. ವಿ ಜೋಸ್ ಹೇಳಿದ್ದರು. ಕೋವಿಡ್ ಮಾರ್ಗ ಸೂಚಿಗಳನ್ನು ಪಾಲಿಸಿ ಜೂನ್ 13 ರಿಂದ ಸಾಯಂಕಾಲ ಕೋರ್ಸ್ ಭಾನುವಾರ ಸಂಜೆ 6 ಕ್ಕೆ, ರೇಗುಲರ್ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಶುಕ್ರವಾರ ತನಕ ಬೆಳಿಗ್ಗೆ 9 ಕ್ಕೆ ಆನ್ಲೈನ್ ಕ್ಲಾಸ್ ಗಳು ನಡೆಯುತ್ತದೆ.
ಏಷ್ಯಾ ಥಿಯೋಲೊಜಿಕಲ್ ಅಸೋಸ್ಸಿಯೇಷನ್ ಅಂಗೀಕಾರದಿಂದ ನಡೆಸುವ ಕಾಲೇಜಿನಲ್ಲಿ ಐ ಪಿ ಸಿ ರಾಷ್ಟ್ರೀಯ ಕಾರ್ಯದರ್ಶಿ ಪಾಸ್ಟರ್. ಸಾಮ್ ಜೋರ್ಜ್ ಪ್ರಾಂಶುಪಾಲರಾಗಿಯೂ, ಡಾ. ಪಾಸ್ಟರ್. ವರ್ಗೀಸ್‌ ಫಿಲಿಪ್ಪ್ ರೆಜಿಸ್ಟ್ರಾರ್ ಆಗಿಯೂ, ಪಾಸ್ಟರ್. ಕೆ. ವಿ. ಜೋಸ್ ನಿರ್ವಾಹಕರಾಗಿಯೂ ಕಾರ್ಯ ನಿರ್ವಹಿಸುತ್ತಾರೆ.

Contact Us. 9845378981
Kbcipcks@gmail.com
www.karnatakabiblecollege.org

LEAVE A REPLY

Please enter your comment!
Please enter your name here