ಕರ್ನಾಟಕದ ಉಜ್ಜೀವನಕ್ಕಾಗಿ ಜೂನ್ 22ರಂದು ಸಭೆಗಳ ಸಂಯುಕ್ತ ಪ್ರಾರ್ಥನೆ
ಬೆಂಗಳೂರು : ಕರ್ನಾಟಕ ರಾಜ್ಯದ ಸಮಾಧಾನಕ್ಕೂ, ಬಿಡುಗಡೆಗಾಗಿಯೂ, ಕರ್ನಾಟಕದ ಮುಖ್ಯ ಸಾಲಿನ ಪೆಂತೆಕೋಸ್ಟಲ್ ಸಭೆಗಳೂ, ಸ್ವತಂತ್ರ ಸಭೆಗಳೂ ಸೇರಿ ಜೂನ್ 22 ಬೆಳಿಗ್ಗೆ 9:00 ರಿಂದ 2:00 ರವರೆಗೆ ಪ್ರಾರ್ಥನಾ ಸಂಗಮ ಆನ್ಲೈನ್ ಮೂಲಕ ನಡೆಯುತ್ತದೆ.
ಸಭೆಗಳ ಏಕತೆಗೂ ಪುನರುಜ್ಜೀವನಕ್ಕಾಗಿಯೂ ಪ್ರಾರ್ಥನೆಗಾಗಿರುವ ಸಮಯ ಬಂದಿದೆ ಎಂಬ ಧ್ಯೇಯವಾಕ್ಯವನ್ನು ಮುಂದಿಟ್ಟು ಈ ಐಕ್ಯ ಪ್ರಾರ್ಥನೆ ನಡೆಸಲಾಗುವುದು.
ಕರ್ನಾಟಕದ ಮುಖ್ಯ ಸಾಲಿನ ಪೆಂತೆಕೋಸ್ಟ್ ಸಭೆಗಳಾದ ಐ ಪಿ ಸಿ, ಎ.ಜಿ, ಚರ್ಚ್ ಆಫ್ ಗಾಡ್, ಶಾರೋನ್ ಫೆಲೋಶಿಪ್ ಚರ್ಚ್, ಕರ್ನಾಟಕ ಶಾರೋನ್ ಅಸೆಂಬ್ಲಿ, ನ್ಯೂ ಇಂಡಿಯಾ ಚರ್ಚ್ ಆಫ್ ಗಾಡ್, ಬೆಂಗಳೂರು ಪೆಂತೆಕೋಸ್ಟಲ್ ಫೆಲೋಷಿಪ್, ಸ್ವತಂತ್ರ ಸಭೆಗಳಾದ ಶಿಲೋಹಾಂ ಮಿನಿಸ್ಟ್ರೀಸ್, ಹೆವೆನ್ಲಿ ಆರ್ಮಿಸ್, ಪೆಂತೆಕೋಸ್ಟ್ ಸಂಸ್ಥೆಗಳಾದ ಕೆ. ಯು.ಪಿ.ಎಫ್,ಯು.ಪಿ.ಎಲ್. ಪಿ. ಎಫ್, ಪೆಂತಕೋಸ್ಟ್, ಕೆ. ಇ, ಬೆಂಗಳೂರು ಕ್ರೈಸ್ತ ಮಾಧ್ಯಮ ಸಂಘಟನೆ (ಬಿ.ಸಿ.ಪಿ.ಎ) ಎಂಬೀ ಸಂಸ್ಥೆಗಳು ಸಂಯುಕ್ತ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ವಿವಿಧ ಪ್ರಾದೇಶಿಕ ಭಾಷೆಗಳಲ್ಲಿರುವ ವಿಶ್ವಾಸಿ ಗಳನ್ನೂ, ಸೇವಕರುಗಳನ್ನೂ ಒಗ್ಗೂಡಿಸಿ ನಡೆಸುವ ಈ ಪ್ರಾರ್ಥನೆಯು ಕರ್ನಾಟಕದ ದೇವರ ಮಕ್ಕಳಿಗೆ ಹೊಸತನ ವಾಗಿದೆ.
ಕರ್ನಾಟಕದ ಪ್ರಾರ್ಥನಾ ಸಹಯೋಗಿಗಳೂ, ಸಭೆಗಳ ನಾಯಕರೂ, ಮಿಷನ್ ಕ್ಷೇತ್ರಗಳಲ್ಲಿ ಇರುವ ಮುಖ್ಯ ಸೇವಕರು ಈ ಪ್ರಾರ್ಥನೆಗೆ ನಾಯಕತ್ವ ವಹಿಸುತ್ತಾರೆ. ಕರ್ನಾಟಕ ರಾಜ್ಯದ ಹಾಗೂ ದೇಶದ ಸೌಖ್ಯಕ್ಕಾಗಿ, ಸುವಾರ್ತೀಕರಣಕ್ಕಾಗಿ, ಆರಾಧನಾಲಯಗಳು ತೆರೆಯುವುದಕ್ಕಾಗಿ, ಆತ್ಮಿಕ ಉಜ್ಜೀವನಕ್ಕಾಗಿಯೂ, ಕೋವಿಡ್ ಮಹಾಮಾರಿ ಯಿಂದ ಬಿಡುಗಡೆಗಾಗಿಯೂ, ಮಿಷನರಿ ಕುಟುಂಬಗಳಿಗಾಗಿಯೂ, ಕಷ್ಟಗಳಲ್ಲಿರುವ ಕುಟುಂಬಗಳಿಗಾಗಿಯೂ ಪ್ರಾರ್ಥಿಸುವುದಕ್ಕಾಗಿ ಎಲ್ಲರೂ ಪಾಲ್ಗೊಳ್ಳಬೇಕೆಂದು ತಿಳಿಸಿದ್ದಾರೆ.
ಡಾಕ್ಟರ್// ಪಾಸ್ಟರ್ ಜಾನ್ಸನ್ ಕೆ.ವಿ, ಸಭಾ ಪಾಲಕರುಗಳಾದ ಸಿಬಿ ಜೇಕಬ್,ಹಾರಿ ಪೆರೇರಾ, ಜೋಸ್ ಮ್ಯಾಥ್ಯು, ಪಿ.ಎಸ್ ಜಾರ್ಜ್, ಮೆರ್ಸಿ ಮೋನಿ ಎಂಬಿವರು ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಾರೆ.
ಮೀಟಿಂಗ್ ಐ. ಡಿ: 7312151047