ಬೆಂಗಳೂರು ವಿಕ್ಟರಿ ಏ.ಜಿ. ಸಭೆಯ ರಜತ ಮಹೋತ್ಸವ ಸಮಾರಂಭವು ಡಿಸೆಂಬರ್ 5 ನಾಳೆ

0
166

 

ವರದಿ: ಬೇಬನ್ ಟಿ. ಜೋಸೆಫ಼್

ಬೆಂಗಳೂರು : ಹೆಬ್ಬಾಳದ ಚಿರಂಜೀವಿ ಲೇಔಟಿನ ವಿಕ್ಟರಿ ಇಂಟರ್ನ್ಯಾಷನಲ್ ಆಸಂಬ್ಲೀಸ್ ಆಫ಼್ ಗಾಡ್ ವರ್ಷಿಪ್ ಸೆಂಟರ್ ನ ರಜತ ಮಹೋತ್ಸವ ಸಮಾರಂಭವು ಡಿಸೆಂಬರ್ 5 ಬೆಳಿಗ್ಗೆ 6.30 ಕ್ಕೆ ಸಭಾಮಂದಿರದಲ್ಲಿ ನಡೆಯಲಿದೆ.

ಗೋವ ರಾಜ್ಯದ ಗವರ್ನರ್ ಆದ ಸನ್ಮಾನ್ಯ. ಶ್ರೀ. ಶ್ರೀಧರನ್ ಪಿಳ್ಳೆ ರವರು ಸಮಾವೇಶವನ್ನು ಉದ್ಘಾಟನೆ ಮಾಡುತ್ತಾರೆ. ಶಾಸಕರಾದ ಸನ್ಮಾನ್ಯ ಶ್ರೀ. ಕೃಷ್ಣ ಬೈರೇ ಗೌಡರು, ಅಪೋಸ್ತಲಿಕ್ ಮಿನಿಸ್ಟ್ರೀಸ್ ಉಪಾದ್ಯಕ್ಷರಾದ ಡಾ. ಎಲಿಯಾಸ್ ಜೇಕೆಬ ಇವರು ಮುಖ್ಯಾತಿಧಿಕಳಾಗಿರುತ್ತಾರೆ. ವಿಕ್ಟರಿ ಏ.ಜಿ. ಸಭೆಯ ಸಂಸ್ಧಾಪಕರೂ ಹಿರಿಯ ಸಭಾಪಾಲಕರೂ ಆಗಿರುವ ರೆವ. ರವಿ ಮಣಿಯವರು ಅಧ್ಯಕ್ಷತೆಯನ್ನು ವಹಿಸುತ್ತಾರೆ.

1996 ರಲ್ಲಿ ಉತ್ತರ ಬೆಂಗಳೂರಿನ ಗಂಗಾನಗರದಲ್ಲಿ ಕೇವಲ 20 ಮಂದಿ ವಿಶ್ವಾಸಿಗಳೊಂದಿಗೆ ಉಜ್ಜೀವನ ಕೂಟಗಳ ಬೋಧಕರಾಗಿರುವ ರೆವ. ಪಾಸ್ಟರ್. ರವಿ ಮಣಿಯವರು ಪ್ರಾರಂಭಿಸಿದಂತ: ಸಭೆಗೆ ಇದೀಗ ಕರ್ನಾಟಕ ರಾಜ್ಯದ ನಾನಾ ಭಾಗಗಳಲ್ಲಿ 17 ಸಭೆಗಳೂ ಮತ್ತು ವಿದೇಶದ ಮಧ್ಯ ಪೂರ್ವ ದೇಶದಲ್ಲಿ ಒಂದು ಸಭೆಯೂ ಇದೆ. ಕನ್ನಡ ಭಾಷೆಯಲ್ಲಿ ಆರಾಧನೆ ನಡೆಯುವ ಸಭೆಯಲ್ಲಿ ಆರು ಸಾವಿರಕ್ಕಿಂದ ಹೆಚ್ಚು ಜನರು ಕೂಡಿಬರುತ್ತಿದ್ದಾರೆ. ಅದರ ಜೊತೆಯಲ್ಲಿ ಮಲಯಾಳಂ, ತಮಿಳು, ತೆಲುಗು, ಹಿಂದಿ, ಆಂಗ್ಲ ಭಾಷೆಗಳಲ್ಲೂ ಆರಾಧನೆಗಳು ನಡೆದು ಬರುತ್ತಿದೆ. ಸುವಾರ್ತೀಕರಣ ಸೇವೆಯ ಜೊತೆಯಲ್ಲಿ ಬಡ ಮಕ್ಕಳಿಗೆ ವಿಧ್ಯಾಭ್ಯಾಸದ ಸಹಾಯ, ಮುಪ್ಪಿನ ಪ್ರಾಯದವರಿಗೆ ಅಕ್ಷರಗಳ ತರಬೇತಿ ಕಾರ್ಯಕ್ರಮ, ವಿಧವೆಯರಿಗೆ ಆರ್ಧಿಕ ಸಹಾಯ, ಉಚಿತವಾಗಿ ಆರೋಗ್ಯ ಪರಿರಕ್ಷಣೆ, ನೇತ್ರ ಪರಿಶೋಧನೆ ಶಿಬಿರ, ರಕ್ತದಾನ ಶಿಬಿರ, ಬಡ ವಿಧವೆಯರಿಗೆ ಪ್ರತಿ ತಿಂಗಳು ಕಿರಾಣಿ ಸಾಮಾನಗಳನ್ನು ಕೊಡುವದು, ಹೀಗೆ ಅನೇಕ ರೀತಿಯ ಸೇವಾ ಕಾರ್ಯಕ್ರಮಗಳನ್ನೂ ಕೂಡ ಸಭೆಯು ಮುನ್ನಡೆಸುತ್ತಾಯಿದೆ. ಕರ್ನಾಟಕ ರಾಜ್ಯದಲ್ಲಿ ಇತ್ತೀಚೆಗೆ ಹೊರ ಬಿಟ್ಟಿರುವ ಮತಾಂತರ ವಿರೋಧಿ ಕಾನೂನನ್ನು ತಡೆಗೊಳಿಸುವದಕ್ಕಾಗಿ ಬೇರೆ ಕ್ರೆಸ್ತ ಸಭೆಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುವದಕ್ಕಾಗಿ ಪೆಂಥೇಕೋಸ್ತ್ ಸಭೆಗಳ ಪ್ರತಿನಿಧಿಯಾಗಿಯೂ ಪಾಸ್ಟರ್. ರವಿ ಮಣೀಯವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here