ಐಪಿಸಿ ಕರ್ನಾಟಕ ರಾಜ್ಯ ಸೇವಕರ ಸಮಾವೇಶ 2025, ಅಕ್ಟೋಬರ್ 22ರಂದು
ಪಾಸ್ಟರ್ ಲಾನ್ಸನ್ ಪಿ. ಮತ್ತಾಯಿ
ಬೆಂಗಳೂರು: ಐಪಿಸಿ ಕರ್ನಾಟಕ ರಾಜ್ಯದ ಸೇವಕರ ಸಮಾವೇಶ ಅಕ್ಟೋಬರ್ 22, 23 ಮತ್ತು 24ರಂದು ಹೊರಮಾವಿನಲ್ಲಿರುವ ಐಪಿಸಿ ರಾಜ್ಯ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
ಐಪಿಸಿ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಪಾಸ್ಟರ್ ಡಾ. ವರ್ಗೀಸ್ ಫಿಲಿಪ್ ಅವರು ಈ ಸಮಾವೇಶವನ್ನು ಉದ್ಘಾಟನೆ ಮಾಡಲಿದ್ದಾರೆ. ಪಾಸ್ಟರ್ ವಿಲ್ಸನ್ ಜೋಸೆಫ್, ಡಾ. ಬಿಜು ಚಾಕೋ, ಪಾಸ್ಟರ್ ಬಿಜು ಮ್ಯಾಥ್ಯೂ ಸೇರಿದಂತೆ ಹಲವಾರು ದೇವ ಸೇವಕರು ವಾಕ್ಯ ಸಂದೇಶವನ್ನು ಮಾಡಲಿದ್ದಾರೆ.
"ದೇವರ ರಾಜ್ಯವು ವಚನದಲ್ಲಿ ಅಲ್ಲ, ಶಕ್ತಿಯಲ್ಲಿಯೇ ಇರುವುದು" (1 ಕೊರಿಂಥಿಯರು 4:20) ಎಂಬುದು ಈ ಸಮಾವೇಶದ ವಿಷಯವಾಗಿರಲಿದೆ.
ಕರ್ನಾಟಕದಾದ್ಯಂತದ 25 ಸೆಂಟರ್ಗಳು ಮತ್ತು 21 ಏರಿಯಾಗಳಿಂದ ಸುಮಾರು ಒಂದು ಸಾವಿರಕ್ಕಿಂತÀ ಹೆಚ್ಚು ದೇವರ ಸೇವಕರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಶುಕ್ರವಾರದಂದು ಕರ್ತನ ಭೋಜನೆಯೊಂದಿಗೆ ಈ ಸಮಾವೇಶ ಮುಕ್ತಾಯವಾಗಲಿದೆ.
ಐಪಿಸಿ ಕರ್ನಾಟಕ ರಾಜ್ಯ Vice President ಪಾಸ್ಟರ್ ಕೆ.ವಿ. ಜೋಸ್, ರಾಜ್ಯ ಕಾರ್ಯದರ್ಶಿ ಪಾಸ್ಟರ್ ವರ್ಗೀಸ್ ಮ್ಯಾಥ್ಯೂ, ಸಹ ಕಾರ್ಯದರ್ಶಿಗಳಾದ ಪಾಸ್ಟರ್ ಪಿ.ಪಿ. ಜೋಸೆಫ್ ಮತ್ತು ಬ್ರದರ್ ಪಿ. ಪೌಲ್ಸನ್ ಹಾಗೂ ಐಪಿಸಿ ಕರ್ನಾಟಕ ರಾಜ್ಯದ ಟ್ರೆಷರಾರ್ ಆದ ರಾಜ್ಯದ ಬ್ರದರ್ ಷಾಜಿ ಪಾರೇಲ್ ಅವರು ಈ ಸಮಾವೇಶದ ನೇತೃತ್ವ ವಹಿಸಿದ್ದಾರೆ

