ಐಪಿಸಿ ಕರ್ನಾಟಕ ರಾಜ್ಯ  ರಾಮನಗರ ಘಟಕದ ಸಮಾವೇಶ ಅಕ್ಟೋಬರ್ 31, ನವಂ. 01

ಐಪಿಸಿ ಕರ್ನಾಟಕ ರಾಜ್ಯ  ರಾಮನಗರ ಘಟಕದ ಸಮಾವೇಶ ಅಕ್ಟೋಬರ್ 31, ನವಂ. 01

ಬೆಂಗಳೂರು :ಐಪಿಸಿ ಕರ್ನಾಟಕ ರಾಜ್ಯ ರಾಮನಗರ ಸಮಾವೇಶ ಅಕ್ಟೋಬರ್ 31 ನವೆಂಬರ್ 01 ನೇ ತಾರೀಖಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಯಗಾನಹಳ್ಳಿ ಬಿಸಿಎಂ ಕ್ಯಾಂಪ್ ನಲ್ಲಿ ನಡೆಯಲಿದೆ ಪಾಸ್ಟರ್ ಶಿಬು ಕೆ. ಮತ್ತಾಯಿ ರವರು ಸಮಾವೇಶವವನ್ನು ಉದ್ಘಾಟನೆ ಮಾಡಲಿದ್ದಾರೆ. ಬೆಳಗ್ಗೆ 9.30 ಕ್ಕೆ ಆರಂಭಿಸಲಿರುವ ಸಮಾವೇಶ ಸಮಾರಂಭದಲ್ಲಿ ಐಪಿಸಿ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರದ ಪಾಸ್ಟರ್. ಡಾಕ್ಟರ್  ವರ್ಗೀಸ್ ಫಿಲಿಪ್, ಪಾಸ್ಟರ್ ಕೆ ಪಿ ಕುರಿಯನ್,  ಐಪಿಸಿ ಕರ್ನಾಟಕ ರಾಜ್ಯದ ಸಹ ಕಾರ್ಯದರ್ಶಿಯಾದ ಪಾಸ್ಟರ್ ಪಿ ಪಿ ಜೋಸೆಫ್,  ಐಪಿಸಿ ಕರ್ನಾಟಕ ರಾಜ್ಯ ಸಹೋದರಿ ಒಕ್ಕೂಟದ ಅಧ್ಯಕ್ಷೆ ಸಹೋದರಿ ಲಿಲ್ಲಿ ಕುಟ್ಟಿ ವರ್ಗಿಸ್, ಐಪಿಸಿ ರಾಮನಗರ ಘಟಕದ ಪಿ ವೈ ಪಿ ಎ ಕಾರ್ಯದರ್ಶಿಯಾದ ಬ್ರದರ್ ಡೊನ್ ಅಬ್ರಹಾಂ, ಸುವಾರ್ತಿಕ ಜಯಂತ್ ಗೌಡ  ರವರು ಈ ಕೂಟಗಳಲಿ ವಾಕ್ಯ ಸಂದೇಶವನ್ನು ನೀಡಲಿದ್ದಾರೆ ಹಾಗೂ ಪಾಸ್ಟರ್ ಗಿರೀಶ್ ನಾಯಕ್ ರವರು ಸ್ತುತಿ ಮತ್ತು ಆರಾಧನೆ ನಡೆಸಲಿದ್ದಾರೆ. 
ಈ ಸಮಾವೇಶದಲ್ಲಿ ಯೌವನಸ್ಥ ಕೂಟ, ಸಹೋದರಿಗಾಗಿರುವ ಕೂಟ, ಉಜ್ಜೀವನ ಕೂಟ, ಬಹಿರಂಗ ಕೂಟಗಳು ನಡೆಯಲಿದೆ.  
ಪಾಸ್ಟರ್ ಪ್ರಕಾಶ್ ಗೌಡ.  ಬ್ರದರ್ ಡೋನ್ ಅಬ್ರಹಾಂ, ಪಾಸ್ಟರ್ ಪ್ರವೀಣ್ ಕುಮಾರ್ ರವರು ಈ ಕೂಟಗಳಿಗೆ ನಾಯಕತ್ವವನ್ನು ವಹಿಸುತ್ತಾರೆ.