ಕರ್ನಾಟಕ ಬೈಬಲ್ ಕಾಲೇಜು ಪದವಿಪ್ರದಾನ ಸಮಾರಂಭ ನಡೆಸಿತು
ಬೆಂಗಳೂರು: ಐಪಿಸಿ ಕರ್ನಾಟಕ ರಾಜ್ಯ ಸತ್ಯವೇದ ಸೆಮಿನಾರಿಯಾದ ಕರ್ನಾಟಕ ಬೈಬಲ್ ಕಾಲೇಜಿನ 31ನೇ ಸ್ನಾತಕೋತ್ತರ ಸಮಾರಂಭ ಹೊರಮಾವು ಅಗರ ಐಪಿಸಿ ಕರ್ನಾಟಕ ರಾಜ್ಯದ ಪ್ರದಾನ ಕಛೇರಿ ಹಾಲ್ನಲ್ಲಿ ನಡೆಯಿತು. ಐಪಿಸಿ ಕರ್ನಾಟಕ ರಾಜ್ಯ ಕಾರ್ಯದರ್ಶಿ ಪಾಸ್ಟರ್ ವರ್ಗೀಸ್ ಮ್ಯಾಥ್ಯೂ ಅಧ್ಯಕ್ಷರಾಗಿದ್ದರು. ಸಯಾಕ್ಸ್ ಬೈಬಲ್ ಕಾಲೇಜಿನ ಪ್ರಾಯೋಗಿಕ ದೈವಶಾಸ್ತ್ರ ಮುಖ್ಯಸ್ಥ ಡಾ.ವರ್ಗೀಸ್ ಥಾಮಸ್ ಮುಖ್ಯ ಅತಿಥಿಯಾಗಿದ್ದರು. ಐಪಿಸಿ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಪಾಸ್ಟರ್ ಡಾ.ವರ್ಗೀಸ್ ಫಿಲಿಪ್ ಮುಖ್ಯ ಭಾಷಣ ನೀಡಿದರು. ಧರ್ಮಶಾಸ್ತ್ರ ಅಧ್ಯಯನ ಪೂರ್ಣಗೊಳಿಸಿದ 42 ವಿದ್ಯಾರ್ಥಿಗಳಿಗೆ ಪ್ರಿನ್ಸಿಪಾಲ್ ಪಾಸ್ಟರ್ ಸ್ಯಾಮ್ ಜಾರ್ಜ್ ಸ್ನಾತಕೋತ್ತರ ಪ್ರಮಾಣಪತ್ರಗಳನ್ನು ವಿತರಿಸಿದರು. ಕೆ.ಬಿ.ಸಿ. ಮ್ಯಾಗಜೀನ್ ಅನ್ನು ಪಾಸ್ಟರ್ ಸತೀಶ್ ಕುಮಾರ್ ಪಾಸ್ಟರ್ ಸ್ಯಾಮ್ ಜಾರ್ಜ್ ಅವರಿಗೆ ನೀಡಿ ಪ್ರಕಟಿಸಿದರು. ನಿತ್ಯತೆಯಲ್ಲಿ ಸೇರ್ಪಡೆಗೊಂಡ ಪಾಸ್ಟರ್ ಟಿ ಟಿ ಜೋಸೆಫ್ ಕಳೆದ ಮೂರು ದಶಕಗಳ ಹಿಂದೆ ಸ್ಥಾಪಿಸಿದ ಕರ್ನಾಟಕ ಬೈಬಲ್ ಕಾಲೇಜಿಗೆ IATA ಮಾನ್ಯತೆಯೂ ಲಭಿಸಿದೆ. ಪ್ರಸ್ತುತ M.Div, B.Th, D.Th, C.Th, B.Min and PTC ವರೆಗಿನ ಕೋರ್ಸ್ಗಳು ಕನ್ನಡ, ಮಲಯಾಳಂ,ಇಂಗ್ಲಿಷ್ ಭಾಷೆಗಳಲ್ಲಿ ತರಗತಿಗಳು ನಡೆಯುತ್ತಿವೆ. ಪಾಸ್ಟರ್ ಕೆ.ವಿ. ಜೋಸ್ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಸತ್ಯವೇದ ಅಧ್ಯಯಾನವನ್ನು ನೀವು ಮಾಡಲು ಇಚ್ಚಿಸುವುದಾದರೆ ನಿಮಗೆ 9845378981 ಗೆ ಕರೆಮಾಡಿ ಮಾಹಿತಿಯನ್ನು ಪಡೆಯಬಹುದು.
ವರದಿ: ಪಾಸ್ಟರ್ ಲಾನ್ಸನ್ ಪಿ. ಮ್ಯಾಥ್ಯೂ

