ಐಪಿಸಿ ಕರ್ನಾಟಕ ರಾಜ್ಯದ ವಾರ್ಷಿಕ ಸಮಾವೇಶವು ಜನವರಿ 29 ರಿಂದ

ಐಪಿಸಿ ಕರ್ನಾಟಕ ರಾಜ್ಯದ ವಾರ್ಷಿಕ ಸಮಾವೇಶವು ಜನವರಿ 29 ರಿಂದ

ಬೆಂಗಳೂರು: ಇಂಡಿಯಾ ಪೆಂಟೆಕೋಸ್ಟಲ್ ಚರ್ಚ್ ಆಫ್ ಗಾಡ್ (ಐಪಿಸಿ) ಕರ್ನಾಟಕ ರಾಜ್ಯದ 39 ನೇ ವಾರ್ಷಿಕ ಸಮಾವೇಶವು ಜನವರಿ 29 ಗುರುವಾರದಿಂದ ಫೆಬ್ರವರಿ 1 ಭಾನುವಾರದವರೆಗೆ ಹೊರಮಾವು ಅಗರದ ಐಪಿಸಿ ಪ್ರಧಾನ ಕಚೇರಿಯ ಮೈದಾನದಲ್ಲಿ ನಡೆಯಲಿದೆ. ರಾಜ್ಯದ ಅಧ್ಯಕ್ಷರಾದ ಪಾಸ್ಟರ್.ಡಾ. ವರ್ಗೀಸ್ ಫಿಲಿಪ್ ಸಂಜೆ 6 ಗಂಟೆಗೆ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.

ಐಪಿಸಿಯ ರಾಷ್ಟ್ರೀಯ ಅಧ್ಯಕ್ಷರಾದ ಪಾಸ್ಟರ್. ಡಾ. ಟಿ. ವಲ್ಸನ್ ಅಬ್ರಹಾಂ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಪ್ರತಿದಿನ ಸಂಜೆ 6 ಗಂಟೆಯಿಂದ ನಡೆಯಲಿರುವ ಸಮಾವೇಶದಲ್ಲಿ ಸೇವಕರುಗಳಾದ ಕೆ.ವಿ. ಜೋಸ್, ವರ್ಗೀಸ್ ಮ್ಯಾಥ್ಯೂ, ಪಿ.ಪಿ. ಜೋಸೆಫ್, ಸ್ಯಾಮ್ ಜೋರ್ಜ್, ವಿಲ್ಸನ್ ಜೋಸೆಫ್, ಪಿ.ಸಿ. ಚೆರಿಯನ್, ಪಾಸ್ಟರ್. ಡಾ. ಅಲೆಕ್ಸ್ ಜಾನ್, ಪಾಸ್ಟರ್. ಡಾ. ವಿ.ಪಿ. ಜೋಸ್, ಕನ್ನಡ ಭಾಷಿಕರಾದ ಪಾಸ್ಟರ್. ವಿನ್ಸೆಂಟ್ ಅಮಲ್ದಾಸ್ ಮತ್ತು ಪಾಸ್ಟರ್. ಪಿ. ಸ್ಯಾಮುವೆಲ್ ವಿವಿಧ ದಿನಗಳಲ್ಲಿ ವಾಕ್ಯ ಸಂದೇಶವನ್ನು ನೀಡಲಿದ್ದಾರೆ.

ಪಾಸ್ಟರ್. ಟೈಟಸ್ ಚಾಕೊ ಮೈಸೂರು ರವರ ನಾಯಕತ್ವದಲ್ಲಿ ಗಾಯಕ ತಂಡವು ಸಮಾವೇಶದಲ್ಲಿ ಸ್ತುತಿ ಮತ್ತು ಆರಾಧನೆಯನ್ನು ನಿರ್ವಹಿಸುತ್ತಾರೆ.

ಪ್ರತಿದಿನ ಸಂಜೆ 6 ಗಂಟೆಯಿಂದ ಸಮಾವೇಶದಲ್ಲಿ ಸಂಗೀತ ಮತ್ತು ಸುವಾರ್ತಾ ಪ್ರಸಂಗಗಳು ನಡೆಯಲಿದೆ. ಜನವರಿ 29 ರಂದು ಬೆಳಿಗ್ಗೆ 10 ಗಂಟೆಗೆ ಸೇವಕರ ಕೂಟ, ಶುಕ್ರವಾರ ಮತ್ತು ಶನಿವಾರ ಬೆಳಿಗ್ಗೆ 8 ರಿಂದ 9.30 ರವರೆಗೆ ಬೈಬಲ್ ಕ್ಲಾಸ್, ಬೆಳಿಗ್ಗೆ 10 ಗಂಟೆಗೆ ಸಾಮಾನ್ಯ ಕೂಟ ಮತ್ತು ಶುಕ್ರವಾರ ಮಧ್ಯಾಹ್ನ 2.30 ರಿಂದ ರಾಜ್ಯದ ಮಹಿಳಾ ಸಮಾಜದ ಅಧ್ಯಕ್ಷೆಯಾದ ಸಿಸ್ಟರ್ ಲಿಲ್ಲಿಕುಟ್ಟಿ ವರ್ಗೀಸ್ ರವರ ನಾಯಕತ್ವದಲ್ಲಿ ಮಹಿಳೆಯರ ಕೂಟ ನಡೆಯಲಿದೆ.

ಸಿಸ್ಟರ್ ಕ್ಯಾರಲ್ ಇಡೀಚೆರಿಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪ್ಲಸ್ ಟು ತರಗತಿಗಳಲ್ಲಿ ಹೆಚ್ಚಿನ ಫಲಿತಾಂಶಗಳನ್ನು ಸಾಧಿಸಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶ್ರೇಷ್ಠತೆ ಪ್ರಶಸ್ತಿಯನ್ನು ನೀಡಲಾಗುವುದು ಮತ್ತು ಸಮ್ಮೇಳನದಲ್ಲಿ 10 ವಿಧವೆಯವರಿಗೆ ಆರ್ಥಿಕ ಸಹಾಯವನ್ನು ನೀಡಲಾಗುವುದು.

ಪಿವೈಪಿಎ ಮತ್ತು ಸಂಡೇ ಸ್ಕೂಲ್ ನ ವಾರ್ಷಿಕ ಸಮ್ಮೇಳನವು ಶನಿವಾರ ಮಧ್ಯಾಹ್ನ 2.30 ರಿಂದ ನಡೆಯಲಿದೆ.

ಸಮಾರೋಪದ ದಿನದಂದು ಫೆಬ್ರ. 1 ಭಾನುವಾರ ಬೆಳಿಗ್ಗೆ 8.30 ಕ್ಕೆ ಕರ್ನಾಟಕದ ಇತರ ಭಾಗಗಳಿಂದ ಬರುವ ಸೇವಕರುಗಳು ಮತ್ತು ವಿಶ್ವಾಸಿಗಳು ಭಾಗವಹಿಸುವ ಸಮಾವೇಶವು ಕರ್ತನ ಮೇಜು ಮತ್ತು ಸಂಯುಕ್ತ ಆರಾಧನೆಯೊಂದಿಗೆ ಮುಕ್ತಾಯಗೊಳ್ಳಲಿದೆ.

ರಾಜ್ಯ ಉಪಾಧ್ಯಕ್ಷರಾದ ಪಾಸ್ಟರ್. ಕೆ.ವಿ. ಜೋಸ್ ಸಮಾವೇಶದ ಮುಖ್ಯ ಸಂಚಾಲಕರಾಗಿದ್ದು, ಪಾಸ್ಟರ್. ಜಿಜೋಯ್ ಮ್ಯಾಥ್ಯೂ ಮತ್ತು ಸಹೋದರ ಬಿಜು ಎಂ. ಪಾರೇಲ್ ಸಹ ಸಂಚಾಲಕರಾಗಿರುತ್ತಾರೆ,

ಮತ್ತು ಸಮಾವೇಶದ ಉತ್ತಮ ನಿರ್ವಹಣೆಗಾಗಿ ವಿವಿಧ ಉಪಸಮಿತಿಗಳನ್ನು ಸಹ ಆಯ್ಕೆ ಮಾಡಲಾಗಿದೆ. ಪ್ರಾರ್ಥನಾ ಸಂಚಾಲಕರಾಗಿ ಪಾಸ್ಟರ್ ಕೆ.ಕೆ.ಸಾಜನ್, ಪ್ರಚಾರ ಸಂಚಾಲಕರಾಗಿ ಪಾಸ್ಟರ್. ಜಾರ್ಜ್ ಅಬ್ರಹಾಂ, ಸಹ ಸಂಚಾಲಕರಾಗಿ ಪಾಸ್ಟರ್. ಲ್ಯಾನ್ಸನ್ ಪಿ. ಮ್ಯಾಥ್ಯೂ, ಮಾಧ್ಯಮ ಸಂಚಾಲಕರಾಗಿ ಪಾಸ್ಟರ್. ಜೋಮನ್ ಜೋನ್, ಹಣಕಾಸು ಸಂಚಾಲಕರಾಗಿ ರಾಜ್ಯದ ಖಜಾಂಚಿಯಾದ ಸಹೋದರ ಸಾಜಿ. ಟಿ. ಥಾಮಸ್ ಮತ್ತು ಸೇವಕರುಗಳಾಧ ಕೆ.ಪಿ.ಜಾರ್ಜ್, ಸಾಬು ಜಾನ್, ಕ್ರಿಸ್ತುದಾಸ್, ಜೇಮ್ಸ್ ಪಾರೇಲ್, ಸಹೋದರ ಸಿಜೊ ಸ್ಯಾಮ್, ಜೋಸ್ ವರ್ಗೀಸ್, ಸಹೋದರ ಜಾರ್ಜಿ ಜೋಸೆಫ್, ಸಹೋದರ ಸಾಲು ಜಾರ್ಜ್ ಪಾರೇಲ್, ಸಹೋದರ ಜಾಯ್ ಪಾಪಚ್ಚನ್, ಸಹೋದರ ಬ್ಲೂಸನ್ ಕೆ.ಐ ಅವರನ್ನು ವಿವಿಧ ಉಪಸಮಿತಿಗಳ ಸಂಚಾಲಕರಾಗಿ ಆಯ್ಕೆ ಮಾಡಲಾಗಿದೆ.

ಪಾಸ್ಟರ್. ಡಾ. ವರ್ಗೀಸ್ ಫಿಲಿಪ್ ರವರ ನಾಯಕತ್ವದಲ್ಲಿ,  ಕರ್ನಾಟಕದ 31 ಜಿಲ್ಲೆಗಳಲ್ಲಿ 25 ಸೆಂಟರ್ ಸಭೆಗಳು, 24 ಪ್ರಾದೇಶಿಕ ಸಭೆಗಳು ಮತ್ತು 850 ಸೇವಕರುಗಳು ಕರ್ನಾಟಕ ರಾಜ್ಯ ಐಪಿಸಿಯ ನಾಯಕತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಸತ್ಯವೇದ ಅಧ್ಯಯನಕ್ಕಾಗಿ ಬೆಂಗಳೂರು, ಶಿವಮೊಗ್ಗ ಮತ್ತು ರಾಯಚೂರಿನಲ್ಲಿ 3 ಬೈಬಲ್ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ.  BCPA ಪತ್ರಿಕಾಗೋಷ್ಠಿಯಲ್ಲಿ, 

ಕರ್ನಾಟಕದ ವಿವಿಧ ಭಾಗಗಳಿಂದ ಸಮಾವೇಶದಲ್ಲಿ ಭಾಗವಹಿಸುವವರಿಗೆ ವಸತಿ, ಆಹಾರ ಮತ್ತು ಸಾರಿಗೆಗಾಗಿ ವ್ಯಾಪಕ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಮುಖ್ಯ ಸಂಚಾಲಕರಾದ ಪಾಸ್ಟರ್. ಕೆ.ವಿ. ಜೋಸ್, ಕಾರ್ಯದರ್ಶಿಯರಾದ ಪಾಸ್ಟರ್. ವರ್ಗೀಸ್ ಮ್ಯಾಥ್ಯೂ ಮತ್ತು ಪ್ರಚಾರ ಸಂಚಾಲಕರಾದ ಪಾಸ್ಟರ್. ಜಾರ್ಜ್ ಅಬ್ರಹಾಂ ಹೇಳಿದರು.