ಅಕ್ಟೋಬರ್ 31 ರಿಂದ ಚರ್ಚ್ ಆಫ್ ಗಾಡ್ ಬೆಂಗಳೂರು ಸೌತ್ ಸೆಂಟರ್ ಸಮಾವೇಶ

ಅಕ್ಟೋಬರ್ 31 ರಿಂದ ಚರ್ಚ್ ಆಫ್ ಗಾಡ್ ಬೆಂಗಳೂರು ಸೌತ್ ಸೆಂಟರ್ ಸಮಾವೇಶ

ಸುದ್ದಿ: ಬೆನ್ಸನ್ ಚಾಕೊ

ಬೆಂಗಳೂರು:  ಚರ್ಚ್ ಆಫ್ ಗಾಡ್ (ಫುಲ್ ಗೋಸ್ಪೆಲ್) ಇನ್  ಇಂಡಿಯಾ ಕರ್ನಾಟಕ ರಾಜ್ಯದ ಬೆಂಗಳೂರು ಸೌತ್ ಸೆಂಟರ್ ಸಮಾವೇಶವು ಅಕ್ಟೋಬರ್ 31 ರಿಂದ ನವೆಂಬರ್ 2 ರವರೆಗೆ ಬನ್ನೇರುಘಟ್ಟದ MLA ಲೇಔಟ್, ಕಲೇನಾ ಅಗ್ರಹಾರದ ಅಲ್ವೆರ್ನಾ ಭವನ ಸಭಾಂಗಣದಲ್ಲಿ ನಡೆಯಲಿದೆ.

ಚರ್ಚ್ ಆಫ್ ಗಾಡ್ ಕರ್ನಾಟಕ ರಾಜ್ಯದ ದ  ಕೌನ್ಸಿಲ್ ಕಾರ್ಯದರ್ಶಿ ಮತ್ತು ಬೆಂಗಳೂರು ಸೌತ್ ಸೆಂಟರ್ ಪಾಸ್ಟರ್ ಆಗಿರುವ ಜೋಸೆಫ್ ಜೋನ್ ರವರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.

ಸಂಜೆ 6 ರಿಂದ 9 ರವರೆಗೆ ನಡೆಯಲಿರುವ ಕೂಟದಲ್ಲಿ ಸೇವಕರಾದ ಸುಬಾಷ್ ಕುಮಾರಗಂ ಮತ್ತು ಜೋ ತೋಮಸ್ ಬೆಂಗಳೂರು ವಾಕ್ಯ ಸಂದೇಶವನ್ನು ನೀಡಲಿದ್ದಾರೆ.

ಸಹೋದರ ಇಮ್ಮಾನುವೆಲ್ ಕೆ ಬಿ, ಪಾಸ್ಟರ್ ರಿನು ತಂಕಚನ್, ಸಿಸ್ಟರ್ ಕೆಜಿಯಾ ಜೇಮ್ಸ್ ಮತ್ತು ಕೆನ್ಸನ್ ಸ್ಯಾಮ್ ಅಲೆಕ್ಸ್  ಎಂಬುವರು ಸ್ತುತಿ ಆರಾಧನೆಯನ್ನು  ನಡೆಸಲಿದ್ದಾರೆ.

ಭಾನುವಾರ ಜಂಟಿ ಆರಾಧನಾ ಕೂಟದೊಂದಿಗೆ ಸಮಾವೇಶವು ಮುಕ್ತಾಯಗೊಳ್ಳಲಿದೆ.

ಸೌತ್ ಸೆಂಟರ್ ಪಾಸ್ಟರ್ ಜೋಸೆಫ್ ಜೋನ್, ಪಾಸ್ಟರ್ ಸೆಬಾಸ್ಟಿನ್ ಜೋಸೆಫ್ (ಕಾರ್ಯದರ್ಶಿ), ಬ್ರದರ್ ಲಿಜೊ ಜಾರ್ಜ್ (ಖಜಾಂಚಿ), ಬ್ರದರ್ ಬೆನ್ಸನ್ ಚಾಕೊ, ಪಾಸ್ಟರ್ ಪೌಲ್ಸನ್ ಅಬ್ರಹಾಂ (ಪ್ರಕಟಣಾ ಸಂಚಾಲಕರು) ಮತ್ತು ಸೆಂಟರಿನಾ ವಿವಿಧ ಸೇವಕರುಗಳು ಸಹ ಕೂಟಕ್ಕೆ ನಾಯಕತ್ವವನ್ನು ನಡೆಸುವರು.