ಐಪಿಸಿ ಕರ್ನಾಟಕ ರಾಯಚೂರು ವಲಯದ ವಾರ್ಷಿಕ ಸಮಾವೇಶವು ಡಿಸಂಬರ್.12 ರಿಂದ ಕೊಪ್ಪಳದಲ್ಲಿ
ಬೆಂಗಳೂರು: ಐಪಿಸಿ ಕರ್ನಾಟಕ ರಾಜ್ಯದ 37 ನೇ ವಾರ್ಷಿಕ ಸಮಾವೇಶದ ಆರಂಭದ ಅಂಗವಾಗಿ ರಾಯಚೂರು ವಲಯದ ವಾರ್ಷಿಕ ಸಮಾವೇಶವು ಕೊಪ್ಪಳ ಜಿಲ್ಲೆಯ ಇ.ಸಿ.ಐ ಕ್ಯಾಂಪಸ್ ನಲ್ಲಿ ನಡೆಯಲಿದೆ.
ರಾಜ್ಯಾಧ್ಯಕ್ಷರಾದ ಪಾಸ್ಟರ್ ಕೆ.ಎಸ್.ಜೋಸೆಫ್, ಉಪಾಧ್ಯಕ್ಷರಾದ ಪಾಸ್ಟರ್ ಜೋಸ್ ಮ್ಯಾಥ್ಯೂ, ಕಾರ್ಯದರ್ಶಿರಾದ ಡಾ.ವರ್ಗೀಸ್ ಫಿಲಿಪ್ಪ್, ಸೇವಕರುಗಳಾದ ಸ್ಯಾಮ್ ಜೋರ್ಜ್, ಎನ್.ಕೆ.ಜೋರ್ಜ್, ನೂರುದ್ದೀನ್ ಮುಲ್ಲಾ, ಜಿ.ಪಿ.ಫಿಲಿಪ್ ವಾಕ್ಯ ಸಂದೇಶವನ್ನು ನೀಡಲಿದ್ದಾರೆ.
ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಸಮಾವೇಶ, ಮಧ್ಯಾಹ್ನ 2:30 ಕ್ಕೆ ಮಿಷನರಿ ಚಾಲೆಂಜ್, ಹಾಗೂ ಸಂಜೆ 6 ರಿಂದ ಗಾಯಕ ವೃಂದದರಿಂದ ಹಾಡುಗಳು, ಮತ್ತು ವಾಕ್ಯ ಸಂದೇಶ ನಡೆಯಲಿದೆ.
ಸೇವಕರಾದ ಅನ್ಡಿ ಕೋಣೂರ ನೇತೃತ್ವದ ಹಾಡುಗಳನ್ನು ಹಾಡಲಿದ್ದಾರೆ.
ಸೇವಕಗಳರಾದ ವಿಲ್ಸನ್ ತೋಮಸ್ (ವಲಯದ ಸಂಚಾಲಕ), ಸುನಿಲ್ ಐಸಾಕ್ ( ಕನ್ವೀನರ್) ಮತ್ತು ಕೆ.ಪಿ.ಜೋರ್ಜ್ (ಪ್ರಚಾರಕ ಸಂಚಾಲಕ) ಕಾರ್ಯಕ್ರಮಕ್ಕೆ ನಾಯಕತ್ವವನ್ನು ವಹಿಸಲಿದ್ದಾರೆ.