ರಕ್ಷಕನ ಹಾಡುಗಳು' ಕ್ರೈಸ್ತ ಸಂಗೀತ ಸಮಾರಂಭ ಜೂನ್ 7ರಂದು ಬೆಂಗಳೂರಿನಲ್ಲಿ

ರಕ್ಷಕನ ಹಾಡುಗಳು' ಕ್ರೈಸ್ತ ಸಂಗೀತ ಸಮಾರಂಭ ಜೂನ್ 7ರಂದು ಬೆಂಗಳೂರಿನಲ್ಲಿ

ಬೆಂಗಳೂರು: ಕ್ರೈಸ್ತ ವಿಶ್ವಾಸಿಗಳ ಸಂಘಟನೆಯಾದ *'ಮೈ ಚರ್ಚ್'* ವತಿಯಿಂದ ' *ರಕ್ಷಕನ ಹಾಡುಗಳು'* ಎಂಬ ಹೆಸರಿನ ಕ್ರೈಸ್ತ ಸಂಗೀತ ಸಮಾರಂಭವು ಜೂನ್ 7, ಭಾನುವಾರ ಸಂಜೆ 6 ಗಂಟೆಗೆ ಬೆಂಗಳೂರಿನ ಹೆನ್ನೂರುದಲ್ಲಿರುವ ಕ್ಯಾಂಪಸ್ ಕ್ರೂಸೇಡ್ ಸಭಾಂಗಣದಲ್ಲಿ ನಡೆಯಲಿದೆ. ಕ್ರೈಸ್ತ ಭಕ್ತಿಗೀತೆಗಳಿಗೆ ಮಧುರ ಸ್ವರಸೌಂದರ್ಯವನ್ನು ನೀಡಿರುವ ಖ್ಯಾತ ಹಿನ್ನೆಲೆ ಗಾಯಕ ಕೆ. ಜಿ. ಮಾರ್ಕೋಸ್ ಅವರ ನೇತೃತ್ವದಲ್ಲಿ ಹಲವಾರು ಪ್ರಮುಖ ಯುವ ಗಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕ್ರೈಸ್ತ ಭಕ್ತಿಗೀತೆಗಳ ಶ್ರೇಷ್ಠ ಕವಿಗಳಾದ ಕೆ. ವಿ. ಸೈಮನ್ ಹಾಗೂ ಸೇವಕರಾದ ಸಾಧು ಕೊಚ್ಚುನುಜ್ಞು ರವರ ಹಾಡುಗಳು ಒಳಗೊಂಡ ಹೃದಯ ಸ್ಪರ್ಶಿತ ಹಾಡುಗಳನ್ನು ಕೆ. ಜಿ. ಮಾರ್ಕೋಸ್  ಮತ್ತು ಅವರೊಂದಿಗೆ ಖ್ಯಾತ ಹಿನ್ನೆಲೆ ಗಾಯಕಿ ಹಾಗೂ ಸ್ಟಾರ್ ಸಿಂಗರ್ ಸಂಗೀತ ಕಾರ್ಯಕ್ರಮದ ಮೂಲಕ ಜನಪ್ರಿಯರಾಗಿರುವ ಮೆರಿನ್ ಗ್ರಿಗರಿ ಮತ್ತು ಯುವ ತಲೆಮಾರಿನ ನೆಚ್ಚಿನ ಗಾಯಕಿಯಾದ ಶ್ರೇಯಾ ರವರು ಹಾಡಲಿದ್ದಾರೆ.

ಕ್ರಿಸ್ತನ ವಾಕ್ಯದ ಮೂಲಕ ನಂಬಿಕೆಯನ್ನು ಬಲಪಡಿಸಿ, ಪ್ರೀತಿ ಮತ್ತು ಕರುಣೆಯ ಸೇವಾಕಾರ್ಯಗಳಿಗೆ ಮುನ್ನಡೆ ನೀಡುತ್ತಿರುವ 'ಮೈ ಚರ್ಚ್' ಸಂಸ್ಥೆಯ ಸ್ಥಾಪಕರಾದ ಎ. ವಿ. ಥೋಮಸ್ ರವರು ಕಾರ್ಯಕ್ರಮಕ್ಕೆ ಪರಿಚಯಾತ್ಮಕ ಸಂದೇಶ ನೀಡಲಿದ್ದಾರೆ.

ನಿತ್ಯ ನವೀನವಾದ ಭಕ್ತಿಗೀತೆಗಳನ್ನು ಅದೇ ಭಾವಪೂರ್ಣತೆಯೊಂದಿಗೆ ಶ್ರೋತೃಗಳಿಗೆ ತಲುಪಿಸಲು ಅತ್ಯಾಧುನಿಕ ವೃತ್ತಿಪರ ತಾಂತ್ರಿಕ ಸೌಲಭ್ಯಗಳನ್ನು ಒಳಪಡಿಸಿ 'ರಕ್ಷಕನ ಹಾಡುಗಳು' ಎಂಬ ಸಂಗೀತ ಸಮಾರಂಭಕ್ಕಾಗಿ ಸಜ್ಜುಗೊಳಿಸಲಾಗಿದೆ.

ಭಾಗವಹಿಸುವವರಿಗೆ ವಾಹನ ನಿಲುಗಡೆ (ಪಾರ್ಕಿಂಗ್) ಸೌಲಭ್ಯ ಇರುತ್ತದೆ.

ಉಚಿತ ಪಾಸ್‌ಗಳಿಗಾಗಿ ಸಂಪರ್ಕಿಸಿ:
97464 66440, 97461 14444