ವಿಶ್ವಾಸಿಗಳು ಯೇಸು ಕ್ರಿಸ್ತನ ಮೂಲಕ ಲೋಕವನ್ನು ಜಯಿಸಬೇಕು: ಪಾಸ್ಟರ್ ಕೆ.ಎಸ್.ಜೋಸೆಫ್
ಐಪಿಸಿ ಕರ್ನಾಟಕ ರಾಜ್ಯ ಸಮಾವೇಶ ಆರಂಭಗೊಂಡಿದೆ
"ವಿಶ್ವಾಸಿಗಳು ಯೇಸು ಕ್ರಿಸ್ತನ ಮೂಲಕ ಲೋಕವನ್ನು ಜಯಿಸಬೇಕು"....ಪಾಸ್ಟರ್ ಕೆ.ಎಸ್.ಜೋಸೆಫ್
ಬೆಂಗಳೂರು: "ವಿಶ್ವಾಸಿಗಳು ಯೇಸು ಕ್ರಿಸ್ತನ ಮೂಲಕ ಲೋಕವನ್ನು ಜಯಿಸಬೇಕೆಂದು ಕರ್ನಾಟಕ ಐಪಿಸಿ ಅಧ್ಯಕ್ಷರಾದ ಪಾಸ್ಟರ್ ಕೆ. ಎಸ್. ಜೋಸೆಫ್ ಪ್ರಸ್ತಾಪಿಸಿದರು.
ಹೊರಮಾವು ಅಗರ ಐಪಿಸಿ ಪ್ರಧಾನ ಕಚೇರಿ ಸಭಾಂಗಣದಲ್ಲಿ ಇಂಡಿಯಾ ಪೆಂಥೆಕೋಸ್ಟಲ್ ಚರ್ಚ್ (ಐಪಿಸಿ) ಕರ್ನಾಟಕ ರಾಜ್ಯದ 37ನೇ ವಾರ್ಷಿಕ ಸಮಾವೇಶವನ್ನು (ಬೆಂಗಳೂರು ವಲಯ) ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದ ಎಲ್ಲಾ ಭಾಗಗಳಲ್ಲಿ ಕ್ರೈಸ್ತರು ಅನೇಕ ಪ್ರತಿಕೂಲಗಳಿಂದಲೂ ಮತ್ತು ಸಂಕಟಗಳನ್ನು ಎದುರಿಸುತ್ತಿರುವ ಪರಿಸ್ಥಿತಿಯ ದೃಷ್ಟಿಯಿಂದ ಅವರು ಇದನ್ನು ಹೇಳಿದರು. ‘ನಾನು ಬದುಕಿರುವುದರಿಂದ ನೀವೂ ಬದುಕುವಿರಿ’ ಎಂಬ ಕ್ರಿಸ್ತನ ಮಾತುಗಳಿಂದ ದೇವರ ಮಕ್ಕಳೆಲ್ಲರು ಬಲಗೊಳ್ಳಬೇಕು ಎಂದರು.
ಪಾಸ್ಟರ್ ಮೋಹನ್ ಪಿ. ಡೇವಿಡ್ (ಕಾಸರಗೋಡು) ಕೂಡ ಸಂದೇಶವನ್ನು ಸಾರಿದರು.
ಪಾಸ್ಟರ್ ಟಿ.ಎಸ್.ಮ್ಯಾತ್ಯೂಸ್ ಅಧ್ಯಕ್ಷತೆ ವಹಿಸಿದರು.
ಇವಾ. ರಿನು ತಂಗಚನ್ ನೇತೃತ್ವದ ಕನ್ವೆನ್ಷನ್ ಹಾಡಿನ ಸಂಘವು ಆರಾಧನೆಯನ್ನು ನಡೆಸಿದರು.
ಪ್ರತಿದಿನ ಸಂಜೆ 6 ರಿಂದ ನಡೆಯುವ ಸಮಾವೇಶದಲ್ಲಿ ಸೇವಕರುಗಳಾದ ಜೋಸ್ ಮ್ಯಾಥ್ಯೂ, ಡಾ.ವರ್ಗೀಸ್ ಫಿಲಿಪ್, ಸ್ಯಾಮ್ ಜೋರ್ಜ್, ವಿಲ್ಸನ್ ಜೋಸೆಫ್, ಅಲೆಕ್ಸ್ ವೆಟ್ಟಿಕಲ್, ಬಿ.ಮೋನಾಚನ್, ಟಿ.ಡಿ.ತೋಮಸ್ ಅವರು ವಿವಿಧ ದಿನಗಳಲ್ಲಿ ವಾಕ್ಯವನ್ನು ನೀಡಲಿದ್ದಾರೆ.
ಪ್ರತಿದಿನ ಸಂಜೆ 6 ರಿಂದ ನಡೆಯುವ ಸಮಾವೇಶದಲ್ಲಿ ಪಾಸ್ಟರ್ ಸಾಜನ್ ಜೋಯ್ ಮುಖ್ಯ ಸಂದೇಶ ನೀಡಲಿದ್ದು, ಹಾಡುಗಳು, ವಾಕ್ಯ ಸಂದೇಶ, ಶುಕ್ರವಾರ ಬೆಳ್ಳಿಗೆ 8.30ಕ್ಕೆ ಸತ್ಯವೇದ ಅಧ್ಯಯನ, 10ಕ್ಕೆ ಉಪವಾಸ ಪ್ರಾರ್ಥನೆ ನಡೆಯಲಿದೆ. ಮಧ್ಯಾಹ್ನ 2.30ರಿಂದ ಸಹೋದರಿಯರ ಕೂಟ ಅಧ್ಯಕ್ಷೆಯಾದ ಸಿಸ್ಟರ್ ಲಿಲ್ಲಿಕುಟ್ಟಿ ವರ್ಗೀಸ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಶನಿವಾರ, ಬೆಳಿಗ್ಗೆ 8:30 ಗಂಟೆಗೆ ಸತ್ಯವೇದ ಅಧ್ಯಯನ, 10 ಗಂಟೆಗೆ ಉಜ್ಜಿವನ ಕೂಟ ಮತ್ತು ಮಧ್ಯಾಹ್ನ 2:30 ರಿಂದ ಪಿವೈಪಿಎ ಮತ್ತು ಭಾನುವಾರ ಶಾಲಾ ವಾರ್ಷಿಕ ಕೂಟ ನಡೆಯಲಿದೆ.
ಸಮಾಪ್ತಿ ದಿನವಾದ ಭಾನುವಾರ ಬೆಳಗ್ಗೆ 8.30ಕ್ಕೆ ಕರ್ತನ ಭೋಜನ ಹಾಗೂ ಜಂಟಿ ಆರಾಧನೆಯೊಂದಿಗೆ ಸಮಾವೇಶ ಮುಕ್ತಾಯವಾಗಲಿದೆ.
ಜನರಲ್ ಕನ್ವೀನರ್ ಪಾಸ್ಟರ್ ಜೋಸ್ ಮ್ಯಾಥ್ಯೂ, ಜಂಟಿ ಸಂಚಾಲಕರು ಪಾಸ್ಟರ್ ಜೋರ್ಜ್ ಅಬ್ರಹಾಮ್ (ರೇನಿ), ಸಹೋದರ ರೆಜಿ ಜಾರ್ಜ್, ಸಹೋದರ ಷಾಜಿ ಪಾರೇಯಿಲ್, ಪ್ರಚಾರ ಸಂಚಾಲಕ ಪಾಸ್ಟರ್ ಜೋಮನ್ ಜೋನ್
ರವರು ನಾಯಕತ್ವವನ್ನು ವಹಿಸುತ್ತಾನೆ.