ಪಾಸ್ಟರ್ ಡಾ. ರವಿ ಮಣಿ ದಕ್ಷಿಣ ಭಾರತದ ಎ.ಜಿ. ಸಹಾಯಕ ಅಧೀಕ್ಷಕರಾಗಿ ಆಯ್ಕೆ
ಚೆನ್ನೈ: ದಕ್ಷಿಣ ಭಾರತದ ಅಸೆಂಬ್ಲೀಸ್ ಆಫ್ ಗಾಡ್ (AG) ಸಂಸ್ಥೆಯ ಸಹಾಯಕ ಅಧೀಕ್ಷಕರಾಗಿ ಪಾಸ್ಟರ್ ಡಾ. ರವಿ ಮಣಿ ಅವರು ಆಯ್ಕೆಯಾಗಿದ್ದಾರೆ.
ಚೆನ್ನೈನಲ್ಲಿ ನಡೆದ 2026–2028ರ ಅವಧಿಯ ದಕ್ಷಿಣ ಭಾರತ ಎ.ಜಿ. ಚುನಾವಣೆಯಲ್ಲಿ ಪಾಸ್ಟರ್ ರವಿ ಮಣಿ ಅವರು ಆಯ್ಕೆಯಾಗಿದ್ದಾರೆ. ಅವರು ಬೆಂಗಳೂರಿನ ವಿಕ್ಟರಿ ಇಂಟರ್‌ನ್ಯಾಷನಲ್ ವರ್ಶಿಪ್ ಸೆಂಟರ್ ಸಭೆಯ ಸಂಸ್ಥಾಪಕರೂ ಹಾಗೂ ಹಿರಿಯ ಸಭಾ ಸೇವಕರೂ ಆಗಿದ್ದಾರೆ.
ಹೆಚ್ಚಿನ ವಿವರಗಳು ಶೀಘ್ರದಲ್ಲೇ ಪ್ರಕಟಿಸಲಾಗುವುದು.




