ಫೆಬ್ರವರಿ 22 ರಿಂದ ಐಪಿಸಿ ಕರ್ನಾಟಕ ರಾಜ್ಯದ ವಾರ್ಷಿಕ ಸಮಾವೇಶ
ಬೆಂಗಳೂರು: ಇಂಡಿಯಾ ಪೆಂಥೆಕೋಸ್ಟಲ್ ಚರ್ಚ್ (ಐಪಿಸಿ) ಕರ್ನಾಟಕ ರಾಜ್ಯದ 37 ನೇ ವಾರ್ಷಿಕ ಸಮಾವೇಶವು (ಬೆಂಗಳೂರು ವಲಯ) ಗುರುವಾರ, ಫೆಬ್ರವರಿ 22 ರಿಂದ ಫೆಬ್ರವರಿ 25 ರ ಭಾನುವಾರದವರೆಗೆ ಹೊರಮಾವು ಅಗರದ ಐಪಿಸಿ ರಾಜ್ಯ ಕಚೇರಿಯ ಮೈದಾನದಲ್ಲಿ ನಡೆಯಲಿದೆ. ಗುರುವಾರ ಸಂಜೆ 6 ಗಂಟೆಗೆ
ರಾಜ್ಯಾಧ್ಯಕ್ಷರಾಗಿರುವ ಪಾಸ್ಟರ್ ಕೆ.ಎಸ್.ಜೋಸೆಫ್ ಸಮಾವೇಶವನ್ನು ಉದ್ಘಾಟಿಸುವರು.
ಪ್ರತಿದಿನ ಸಂಜೆ 6 ರಿಂದ ನಡೆಯುವ ಸಮಾವೇಶದಲ್ಲಿ ಸೇವಕರುಗಳಾದ ಕೆ.ಎಸ್.ಜೋಸೆಫ್, ಜೋಸ್ ಮ್ಯಾಥ್ಯೂ, ಪಾಸ್ಟರ್ . ಡಾ.ವರ್ಗೀಸ್ ಫಿಲಿಪ್, ಸ್ಯಾಮ್ ಜೋರ್ಜ್, ವಿಲ್ಸನ್ ಜೋಸೆಫ್, ಅಲೆಕ್ಸ್ ವೆಟ್ಟಿಕಲ್, ಬಿ.ಮೋನಚನ್, ಮೋಹನ್ ಪಿ.ಡೇವಿಡ್, ಟಿ.ಡಿ.ತೋಮಸ್ ರವರು ವಿವಿಧ ದಿನಗಳಲ್ಲಿ ವಾಕ್ಯದ ಸಂದೇಶವನ್ನು ನೀಡಲಿದ್ದಾರೆ. ರಿನು ತಂಗಚನ್ ರವರ ನಾಯಕತ್ವದಲ್ಲಿನ ಹಾಡಿನ ಸಂಘವು ಕನ್ವೆನ್ಷನ್ ನಲ್ಲಿ ಆರಾಧನೆಯನ್ನು ನಡೆಸುತ್ತಾರೆ.
ಸಮಾವೇಶದಲ್ಲಿ ಶುಕ್ರವಾರದಂದು ಬೆಳಗಿನ ಉಪವಾಸ ಪ್ರಾರ್ಥನೆ, ಹಾಡುಗಳು, ವಾಕ್ಯ ಸಂದೇಶ ಹಾಗೂ ಶುಕ್ರವಾರ ಬೆಳಗಿನ ಉಪವಾಸ ಪ್ರಾರ್ಥನೆಯಲ್ಲಿ ಪಾಸ್ಟರ್ ಸಾಜನ್ ಜೋಯ್ ಮುಖ್ಯ ಸಂದೇಶ ನೀಡಲಿದ್ದಾರೆ. ಮಧ್ಯಾಹ್ನ 2.30 ರಿಂದ ಸಹೋದರಿಯರ ಕೂಟವು ಸಿಸ್ಟರ್ ಲಿಲ್ಲಿಕುಟ್ಟಿ ವರ್ಗೀಸ್ ನಾಯಕತ್ವದಲ್ಲಿ ನಡೆಯಲಿದೆ.
ಶನಿವಾರ ಮಧ್ಯಾಹ್ನ 2.30 ರಿಂದ ಪಿವೈಪಿಎ ಹಾಗೂ ಭಾನುವಾರ ಶಾಲಾ ವಾರ್ಷಿಕ ಸಭೆಯೂ ನಡೆಯಲಿದೆ.
ಸಮಾವೇಶದ ಕೊನೆಯ ದಿನವಾದ 25, ಭಾನುವಾರದಂದು ಬೆಳಗ್ಗೆ 8.30 ಗಂಟೆಗೆ ಕರ್ನಾಟಕದ ಇತರ ಭಾಗಗಳಿಂದ ಬಂದಿರುವ ಸೇವಕರುಗಳು ಮತ್ತು ಭಕ್ತರು ಭಾಗವಹಿಸುವ ಜಂಟಿ ಆರಾಧನೆಯೂ ಮತ್ತು ಜಂಟಿ ಆರಾಧನೆಯೊಂದಿಗೆ ಸಮಾವೇಶವು ಮುಕ್ತಾಯಗೊಳ್ಳಲಿದೆ.
ರಾಜ್ಯ ಉಪಾಧ್ಯಕ್ಷರಾದ ಪಾಸ್ಟರ್ ಜೋಸ್ ಮ್ಯಾಥ್ಯೂ ರವರು ಸಮಾವೇಶದ ಪ್ರಧಾನ ಸಂಚಾಲಕರಾಗಿ, ಪಾಸ್ಟರ್ ಜಾರ್ಜ್ ಅಬ್ರಹಾಂ (ರೇನಿ), ಸಹೋದರ ರೆಗಿ ಜೋರ್ಜ್ ಮತ್ತು ಸಹೋದರ ಶಾಜಿ ಪಾರೇಲ್ ಅವರನ್ನು ಜಂಟಿ ಸಂಚಾಲಕರಾಗಿ ರಾಜ್ಯದ ಕೌನ್ಸಿಲ್ ಆಯ್ಕೆ ಮಾಡಿತು.
ಈ ಬಾರಿ ರಾಯಚೂರು, ಹಾಸನ ಮತ್ತು ಮೈಸೂರು ಎಂಬಿ ಮೂರು ವಲಯಗಳಾಗಿ ವಿಂಗಡಿಸಲಾದ ಸಮಾವೇಶವು ಸ್ಥಳೀಯರ ಹೆಚ್ಚಿನ ಸಹಭಾಗಿತ್ವದಲ್ಲಿ ನಡೆಯಿತು.
ಸಮಾವೇಶವನ್ನು ಸುಗಮವಾಗಿ ನಡೆಸಲು ವಿವಿಧ ಉಪಸಮಿತಿಗಳನ್ನೂ ಆಯ್ಕೆ ಮಾಡಲಾಯಿತು. ಪ್ರಾರ್ಥನಾ ಸಂಚಾಲಕರನ್ನಾಗಿ ಪಾಸ್ಟರ್. ತೋಮಸ್ ಕೋಶಿ, ಪ್ರಚಾರ ಸಂಚಾಲಕರನ್ನಾಗಿ ಪಾಸ್ಟರ್. ಜೋಮೊನ್ ಜೋನ್, ಮಾಧ್ಯಮ ಸಂಚಾಲಕರನ್ನಾಗಿ ಸಹೋ. ಜೋಬಿ ಜೋಸೆಫ್, ಹಣಕಾಸು ಸಂಚಾಲಕರನ್ನಾಗಿ ಸಹೋ. ಪಿ ಒ ಸಮುವೆಲ್ ಮತ್ತು ಪಾಸ್ಟರ್. ಎ. ವೈ. ಬಾಬು, ಪಾಸ್ಟರ್. ಕೆ.ಪಿ.ಜೋರ್ಜ್, ಪಾಸ್ಟರ್ ಟಿ.ಎಸ್. ಮ್ಯಾಥ್ಯೂ, ಪಾಸ್ಟರ್ ಕ್ರಿಸ್ತುದಾಸ್, ಸಹೋ. ಜೋಸ್ ವರ್ಗೀಸ್, ಸಹೋ. ಟಿ. ಜೋಯ್, ಸಹೋ. ಬಿಜು ಎಂ ಪಾರಾಯಿಲ್ ಮತ್ತು ಸಹೋ. ಜೇಮ್ಸ್ ಎಂ ಪಾರಾಯಿಲ್ ರವರು ವಿವಿಧ ಉಪಸಮಿತಿಗಳ ಸಂಚಾಲಕರನ್ನಾಗಿ ಆಯ್ಕೆಯಾದರು.